ಪ್ರಿಂಗ್‍ಷೀಮ್ ಅನ್ಸ್ರ್ಟ್
1859-1917. ಜರ್ಮನ್ ಭೌತವಿಜ್ಞಾನಿ. 1859ಜುಲೈ 11ರಂದು ಬ್ರೆಸ್ಲೋ ನಗರದಲ್ಲಿ ಜನನ. ವಿಕಿರಣ ಪ್ರಸಾರ, ಹೀರಿಕೆ ಮತ್ತು ಸ್ಫುರಣದ ಅಧ್ಯಯನ ಈತನ ಆಸಕ್ತ ವಿಷಯಗಳು. ಬ್ರೆಸ್ಲೋವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ಕೃಷ್ಣಾ ಕಾಯಗಳ ಶಾಖ ವಿಕಿರಣವನ್ನು ಕುರಿತು ಈತ ಆಟೋ ಲುಮ್ಮರ್ ಜೊತೆಗಿನ ಸಹಯೋಗದಲ್ಲಿ ನಡೆಸಿದ ಸಂಶೋಧನೆಗಳು ಪ್ರಸಿದ್ಧವಾದವು. ಮುಂದೆ ಮ್ಯಾಕ್ಸ್ ಪ್ಲ್ಯಾಂಕ್ ಬೆಳೆಸಿದ ವಿಕಿರಣದ ಕ್ವಾಂಟಮ್ ಸಿದ್ಧಾಂತಕ್ಕೆ ಇವು ಅಡಿಗಲ್ಲಾದವು. 1917ಜೂನ್ 28ರಂದು ನಿಧನನಾದ.
(ಜಿ.ಎಸ್.ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ